ಬೆಂಗಳೂರಿಗೆ ಡ್ರೋನ್ ಮೂಲಕ ಸ್ಯಾನಿಟೈಸೇಶನ್

ಬೆಂಗಳೂರು: ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಳೆಯಿಂದ 10 ದಿನಗಳ ಕಾಲ 3 ಡ್ರೋಣ್​ಗಳ ಮೂಲಕ ಸ್ಯಾನಿಟೈಸೇಶನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಸಂಸದ ಪಿ.ಸಿ. ಮೋಹನ್ ಸ್ವಂತ ವೆಚ್ಚದಲ್ಲಿ ಚೆನ್ನೈಯಿಂದ ಡ್ರೋಣ್​ಗಳನ್ನು ತರಿಸಿದ್ದು, ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಷಯ ತಿಳಿಸಿದರು. ಇಡೀ ದೇಶ ಕೊವಿಡ್ ಎದುರಿಸುತ್ತಿರುವ ಸಮಯದಲ್ಲಿ ರಾಜ್ಯದಲ್ಲಿ ಡ್ರೋಣ್ ಮೂಲಕ ಸ್ಯಾನಿಟೈಸೇಶನ್ ಮಾಡಲಾಗುತ್ತಿದೆ. ಗರುಡಾ ಏರೋಸ್ಪೇಸ್ ಸಂಸ್ಥೆ ಉಚಿತವಾಗಿ ಡ್ರೋಣ್ ಮೂಲಕ ಸ್ಯಾನಿಟೈಸ್ ಮಾಡುವ ಕಾರ್ಯಕ್ಕೆ ಇಳಿದಿರುವುದು ಸ್ವಾಗತಾರ್ಹ ಎಂದು ಅವರು ತಿಳಿಸಿದರು.

NEWS DESK

TIMES OF BENGALURU