ಖಾಸಗಿ ಆಸ್ಪತ್ರೆಗಳ ಬಾಕಿ ಹಣ ಕೊಡಿ

ಬೆಂಗಳೂರು: ಸಚಿವರೇ ದುಡ್ಡು ಹೊಡೆದಿದ್ದು ಸಾಕು. ಇನ್ನಾದರೂ ಜನರ ಕೆಲಸ ಮಾಡಿ. ಖಾಸಗಿ ಆಸ್ಪತ್ರೆಗಳ ಬಾಕಿ ಹಣ ಕೊಡಿ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇರವಾಗಿ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯರ ಬಳಿ ಸರಕಾರದ ಕಡೆಯವರು ಹಣ ಕೇಳಿರುವ ಆಡಿಯೋ ನಮ್ಮ ಬಳಿ ಇದೆ. ಈಗ ವೈಯಕ್ತಿಕವಾಗಿ ಹೆಸರು ಹೇಳಲ್ಲ. ಸಮಯ ಬಂದಾಗ ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆ ಎಂದರು.

NEWS DESK

TIMES OF BENGALURU