ಬೆಂಗಳೂರು: ಕೊರೊನಾ ಸೋಂಕಿತರು ಯಾವುದೇ ರೀತಿಯ ಭಯ ಭೀತಿಕ್ಕೆ ಒಳಗಾಗದೆ ಸಮರ್ಥವಾಗಿ ಎದುರಿಸುವ ಮೂಲಕ ಕೊರೊನಾ ವಿರುದ್ಧ ಗೆಲ್ಲುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಮಾತ್ರವಲ್ಲದೆ, ನಮ್ಮ ಕುಟುಂಬದಲ್ಲಿ ತಂದೆ, ತಾಯಿ, ಪುತ್ರನಿಗೂ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡು ಗುಣಮುಖರಾಗಿ ಧೈರ್ಯವಾಗಿ ಹೊರಗೆ ಬಂದಿದ್ದೇವೆ. ಹಾಗಾಗಿ ಯಾರೂ ಹೆದರದೆ ಮಾಸಿಕವಾಗಿ ಎದುರಿಸುವ ಮೂಲಕ ಸೋಂಕಿನ ವಿರುದ್ಧ ಗೆಲುವು ಸಾಧಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
NEWS DESK
TIMES OF BENGALURU