ನಕಲಿ ಲ್ಯಾಬ್ ಟೆಸ್ಟ್ ವರದಿ ನೀಡುತ್ತಿದ್ದವರು ಅರೆಸ್ಟ್

ಬೆಂಗಳೂರು : ಕೊರೋನವನ್ನೇ ಬಂಡವಾಳ ಮಾಡಿಕೊಂಡು ಸ್ವಾಬ್ ಟೆಸ್ಟ್ ಪಡೆಯದೇ 700 ರೂ.ಗಳನ್ನು ಪಡೆದು ಕೊರೋನ ನೆಗೆಟಿವ್ ವರದಿ ನೀಡುತ್ತಿದ್ದ ಇಬ್ಬರು ಖದೀಮರನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಕೆ.ಆರ್.ಪುರಂನಲ್ಲಿ ನಡೆದಿದೆ.

ಬಂಧಿತರನ್ನು ಚೌಡದೇನಹಳ್ಳಿಯ ಮುಖೇಶ್ ಸಿಂಗ್(25) ಹಾಗೂ ಹೊಸಹಳ್ಳಿಯ ನಾಗರಾಜು(39) ಎಂದು ಗುರುತಿಸಲಾಗಿದೆ. ವರ್ತೂರಿನ ಸರ್ಜಾಪುರ ರಸ್ತೆಯಲ್ಲಿ ಅಂಗಡಿ ಇಟ್ಟಿದ್ದ ಆರೋಪಿಗಳು, ಸ್ವಾಬ್ ಟೆಸ್ಟ್ ಪಡೆಯದೆ 700 ರೂ.ಗೆ ಕೊರೋನ ನೆಗೆಟಿವ್ ವರದಿ ನೀಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಕೂಡಲೇ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು ಜನ ಸಾಮಾನ್ಯರಂತೆ ತೆರಳಿ ಕೊರೋನ ವರದಿ ಕೇಳಿದ್ದಾರೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡದ ಹಿನ್ನಲೆ ಅವರನ್ನು ಬಂಧಿಸಿದ್ದಾರೆ.

NEWS DESK

TIMES OF BENGAALURU