ಹಸೆಮಣೆ ಏರಬೇಕಿದ್ದ ವರ ಮಸಣ ಸೇರಿದ

ಬೆಂಗಳೂರು: ಮುಂದಿನ ತಿಂಗಳು ಮದುವೆ ಮಾಡಬೇಕು ಎಂಬ ಯೋಜನೆಯಲ್ಲಿದ್ದ ಕುಟುಂಬಕ್ಕೆ ಕೊರೊನಾ ಶಾಕ್ ನೀಡಿದ್ದು, ಬಾಳಿ ಬದುಕಬೇಕಾಗಿದ್ದ ಯುವಕ ಸಾವಿನ ಮನೆ ಸೇರಿದ್ದಾನೆ. ಸಾಗರ್ ಎ.ಜಿ (28) ಕೊರೊನಾಗೆ ಬಲಿಯಾದ ಯುವಕ. ಐಸಿಯು ಬೆಡ್ ಮತ್ತು ಆಕ್ಸಿಜನ್ ಸಿಗದೆ ನರಳಾಡಿ ಪ್ರಾಣಬಿಟ್ಟಿದ್ದಾನೆ. ಟೆಸ್ಕೊ ಖಾಸಗಿ ಕಂಪನಿಯಲ್ಲಿ ಐಸಿ ರೋಲ್ ಆಗಿ ಸಾಗರ್ ಕಾರ್ಯನಿರ್ವಹಿಸುತ್ತಿದ್ದ. ಕಳೆದ 2 ತಿಂಗಳ ಹಿಂದೆ ಸಾಗರ್ ಮದುವೆ ಬಗ್ಗೆ ಮಾತುಕತೆ ಕೂಡ ಆಗಿತ್ತು. ನಿಶ್ಚತಾರ್ಥ ಮಾಡದೆ ಕೇವಲ ಸರಳ ಮದುವೆಗೆ ಯೋಜನೆ ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಸಾಗರ್​ಗೆ ಕೊರೊನಾಗೆ ಬಲಿಯಾಗಿದ್ದಾನೆ.

NEWS DESK

TIMES OF BENGALURU