ಹಣಬಲ ನಮ್ಮ ಗೆಲುವು ಕಸಿದಿದೆ ಆದ್ರೆ ಅಸ್ತಿತ್ವವನ್ನಲ್ಲ

ಬೆಂಗಳೂರು : ಸಾಂದರ್ಭಿಕ ಕಾರಣಗಳಿಗಾಗಿ ರಾಜ್ಯದಲ್ಲಿ ಸದ್ಯ ಸಂಕಷ್ಟದಲ್ಲಿರುವ ಜೆಡಿಎಸ್‌ ಪಕ್ಷವು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸೆಟೆದು ನಿಲ್ಲಲಿದೆ, ಸಿಡಿದೆದ್ದು ಬರಲಿದೆ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಚ ರಾಜ್ಯಗಳ ಫಲಿತಾಂಶ ಹಾಗೂ ರಾಜ್ಯದಲ್ಲಿನ ಉಪಸಮರ ಪಲಿತಾಂಶದ ಬಗ್ಗೆ ಟ್ವೀಟ್ ‌ಮಾಡಿರುವ ಅವರು, ಬಸವಕಲ್ಯಾಣದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಮತ ನೀಡಿದ ಮತದಾರರಿಗೆ ಧನ್ಯವಾದಗಳು. ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರು, ಮುಖಂಡರ ಪರವಾಗಿ ನಾನು ಇರಲಿದ್ದೇನೆ. ಅಪಪ್ರಚಾರ, ಹಣಬಲ ನಮ್ಮ ಗೆಲುವು ಕಸಿದಿರಬಹುದು. ನಮ್ಮ ಅಸ್ತಿತ್ವವನ್ನಲ್ಲ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಸೆಣಸಲು ನಾವು ಶಕ್ತರೆಂಬ ಸಂದೇಶ ರವಾನಿಸಿದ ಕಾರ್ಯಕರ್ತರಿಗೆ ನಾನು ಋಣಿ ಎಂದು ಟ್ವೀಟ್ ಮಾಡಿದ್ದಾರೆ .

NEWS DESK

TIMES OF BENGALURU