ಏನೇ ಫಲಿತಾಂಶ ಬರಲಿ , ರಾಜ್ಯಕ್ಕೆ ಒಳ್ಳೆಯದಾಗಲಿ

ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ಯಾವುದೇ ಪಕ್ಷದ ನಾಯಕರು ಸಹ ಗೆದ್ದ ಬಳಿಕ ಸಂಭ್ರಮಾಚರಣೆ ಮಾಡುವ ಮೂಲಕ ಸೋಂಕು ಪ್ರಸರಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಸ್ಕಿ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಮನ್ನಡೆ ಸಾಧಿಸಿದ್ದೇವೆ. ಚುನಾವಣಾ ಆಯೋಗದಿಂದ ಕಟ್ಟುನಿಟ್ಟಿನ ಆದೇಶ ಇದೆ. ಯಾರೂ ಕೂಡ ಸಂಭ್ರಮಾಚರಣೆ ಮಾಡಬಾರದೆಂಬುದು ನನ್ನ ನಮ್ರತೆಯ ಮನವಿ ಎಂದರು. ಬೆಳಗಾವಿಯಲ್ಲಿಯೂ ಗೆಲುವಿಗೆ ಬಹಳ ಹತ್ತಿರದಲ್ಲಿ ಇದ್ದೇವೆ. ಫಲಿತಾಂಶ ಏನು ಬೇಕಾದರೂ ಆಗಬಹುದು. ಜ‌ನರು ಬದಲಾವಣೆ ಬಯಸಿದ್ದಾರೆ. ಏನೇ ಫಲಿತಾಂಶ ಬರಲಿ, ರಾಜ್ಯಕ್ಕೆ ಒಳ್ಳೆಯ ವಾತಾವರಣ ಬಯಸುತ್ತಿದ್ದಾರೆ. ಮತದಾರರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುಸ್ತೇನೆ ಎಂದರು.

NEWS DESK

TIMES OF BENGALURU