ಬೆಂಗಳೂರು : ಕೋವಿಡ್ 2ನೇ ಅಲೆಗೆ ಇಡೀ ದೇಶವೇ ತತ್ತರಿಸಿದೆ. ಪ್ರತಿದಿನ ಹೆಣಗಳು ಉರುಳುತ್ತಿವೆ. ಪ್ರಾಣ ಹೋಗುತ್ತಿದ್ದರೂ ಕೂಡ ಆಸ್ಪತ್ರೆಗಳಲ್ಲಿ ಬೆಡ್ ಸಿಗದಂತಹ ದುಸ್ಥಿತಿ ನಿರ್ಮಾಣ ಆಗಿದೆ. ಬೆಂಗಳೂರಿನಲ್ಲಂತೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸೆಲೆಬ್ರಿಟಿಗಳು ಕೂಡ ಈ ಸಂದರ್ಭದಲ್ಲಿ ಅಸಹಾಯಕರಾಗಿದ್ದಾರೆ. ತಮ್ಮವರನ್ನು ಕಳೆದುಕೊಂಡು ಅನೇಕರು ಕಷ್ಟ ಪಡುತ್ತಿದ್ದಾರೆ.
ಇತ್ತೀಚೆಗೆ ನಟ ಜಿಮ್ ರವಿ ಅವರ ಸ್ನೇಹಿತರೊಬ್ಬರು ನಿಧನರಾಗಿದ್ದು, ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ರವಿ ದುಃಖ ತೋಡಿಕೊಂಡಿದ್ದಾರೆ.ಇವತ್ತು ನನ್ನ ಸ್ನೇಹಿತರೊಬ್ಬರು ತೀರಿಕೊಂಡರು. ಅವರ ಅಂತ್ಯ ಸಂಸ್ಕಾರಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ತುಂಬ ದುಃಖ ಆಗುತ್ತಿದೆ. ಎಲ್ಲರೂ ಮನೆಯಲ್ಲೇ ಇರಿ. ಆಗ ನಿಮಗೆ ಒಳ್ಳೆಯದಾಗುತ್ತದೆ. ತಂದೆ-ತಾಯಿಯನ್ನು ನೀವು ಕಾಪಾಡಿಕೊಳ್ಳಬಹುದು. ಇವತ್ತು ಬೆಂಗಳೂರಿನ ಪರಿಸ್ಥಿತಿ ಹೀಗಾಗಿದೆ. ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ’ ಎಂದು ರವಿ ಮನವಿ ಮಾಡಿಕೊಂಡಿದ್ದಾರೆ.
NEWS DESK
TIMES OF BENGALURU