ಕಂಗಾಲಾದ ಕೋಳಿ ಮಾಂಸ ಮಾರಾಟಗಾರರು

ಬೆಂಗಳೂರು: ಲಾಕ್‌ಡೌನ್‌ ಪರಿಣಾಮ ಬ್ರಾಯ್ಲರ್‌ ಕೋಳಿ ಧಾರಣೆ ದಿಢೀರ್‌ ಕುಸಿತ ಕಂಡಿದ್ದು, ಸಾಕಾಣಿಕೆದಾರರು ಕಂಗಾಲಾಗಿದ್ದಾರೆ. ಕಳೆದ ವಾರ ಒಂದು ಕೆ.ಜಿ.ಗೆ ₹160 ಬೆಲೆ ಇತ್ತು. ಪ್ರಸ್ತುತ ಕೆ.ಜಿ.ಗೆ ಮಾರುಕಟ್ಟೆಯಲ್ಲಿ ₹ 60ಕ್ಕೆ ಇಳಿದಿದೆ. ಈ ನಡುವೆ ವ್ಯಾಪಾರಿಗಳು ಸಾಕಾಣಿಕೆದಾರರಿಂದ ಒಂದು ಕೆ.ಜಿ.ಗೆ ₹ 30ರಿಂದ ₹ 40 ನೀಡಿ ಖರೀದಿ ಮಾಡುತ್ತಿದ್ದಾರೆ. ಇದು ಸಾಕಾಣಿಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೂಡಿದ ಬಂಡವಾಳವೂ ಅವರ ಕೈಸೇರುತ್ತಿಲ್ಲ. ಹಾಗಾಗಿ, ನಷ್ಟ ಅನುಭವಿಸುವಂತಾಗಿದೆ.

ನಾವು ಸುಮಾರು 15 ವರ್ಷಗಳಿಂದ ಕೋಳಿ ಸಾಕಾಣಿಕೆ ಮಾಡುತ್ತಿದ್ದೇವೆ. ದಿಢೀರನೇ ಬೆಲೆ ಕುಸಿತದಿಂದ ಯಾವುದೇ ಲಾಭ ಕಾಣಲಿಲ್ಲ. ಸರ್ಕಾರ ಮಧ್ಯಸ್ಥಿಕೆವಹಿಸಿ ಸೂಕ್ತ ದರ ನಿಗದಿಪಡಿಸಬೇಕು’ ಎಂದು ಕೋಳಿ ಸಾಕಾಣಿಕೆದಾರ ಸುಹಾಸ್ ಒತ್ತಾಯಿಸಿದರು. ಕುಕ್ಕುಟೋದ್ಯಮ ನಂಬಿಕೊಂಡು 6 ಜನರು ಜೀವನ ಸಾಗಿಸುತ್ತಿದ್ದು ಇದೀಗ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದೇವೆ. ಕೋಳಿ ಸಾಕಾಣಿಕೆದಾರರಿಗೆ ಲಾಕ್‌ಡೌನ್‌ನಲ್ಲಿಯೂ ಮಾರಾಟಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂಬುದು ಎಸ್.ಜಿ. ಫೌಲ್ಟ್ರಿ ಫಾರಂ ಮಾಲೀಕರ ಒತ್ತಾಯ.

NEWS DESK

TIMES OF BENGALURU