ಹದಿನೆಂಟು ಮಂದಿಯ ಜೀವ ಉಳಿಸಿದ ಆಪತ್ಬಾಂಧವ

ಬೆಂಗಳೂರು : ಅದೊಂದು ಖಾಸಗಿ ಆಸ್ಪತ್ರೆ. ಆಕ್ಸಿಜನ್ ಕೊರತೆಯಾಗಿ ಆಗಲೇ ಒಬ್ಬರು ಉಸಿರು ನಿಲ್ಲಿಸಿದ್ದರು. ಹದಿನೆಂಟು ಮಂದಿ ಕೊರೊನಾ ಸೋಂಕಿತರು ಉಸಿರು ನಿಲ್ಲಿಸುವ ಆತಂಕ. ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಎಲ್ಲಾ ಪ್ರಯತ್ನ ಮಾಡಿ ಕೈ ಚೆಲ್ಲಿ ಕೂತಿತ್ತು. ರಾತ್ರಿ ಪಾಳಿ ಕೆಲಸದಲ್ಲಿದ್ದ ಪೆÇಲೀಸ್ ಇನ್‍ಸ್ಪೆಕ್ಟರ್‍ಗೆ ಬಂದ ಒಂದು ಕರೆ ಇಡೀ ಪರಿಸ್ಥಿತಿಯನ್ನೇ ಬದಲಾಯಿಸಿಬಿಟ್ಟಿತು. ಮಧ್ಯರಾತ್ರಿಯಲ್ಲಿ ಆ ಇನ್‍ಸ್ಪೆಕ್ಟರ್ ಚಿತ್ರನಟ ಸೋನು ಸೂದ ಟ್ರಸ್ಟ್‍ನಿಂದ ಆಕ್ಸಿಜನ್ ತರಿಸಿ ಹದಿನೆಂಟು ಮಂದಿಯ ಜೀವ ಉಳಿಸಿ ಆಪತ್ಬಾಂಧವ ಆಗಿದ್ದಾರೆ. ಪೂರ್ಣ ಚಂದ್ರ ತೇಜಸ್ವಿಯ ಸಾಹಿತ್ಯ ಪ್ರೇಮಿ ಆ ಪೆÇಲೀಸ್ ಅಧಿಕಾರಿಯ ಮಾನವೀಯತೆ ಇದೀಗ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.

NEWS DESK

TIMES OF BENGALURU