ಬೆಂಗಳೂರು: ಕೊವಿಡ್ 19 ಅಬ್ಬರವನ್ನು ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಸೋತಿದೆ. ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದು ನೆನಪಿರಬಹುದು. ಇಂದು ಡಿಕೆ ಶಿವಕುಮಾರ್ ಅವರು ಸಂಸದ ತೇಜಸ್ವಿ ಸೂರ್ಯ ಹಾಗೂ ತಂಡಕ್ಕೆ ಕಂಗ್ರಾಟ್ಸ್ ಹೇಳಿ ಟ್ವೀಟ್ ಮಾಡಿದ್ದಾರೆ.
ಬೃಹತ್ ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಿಗೆ ಸರಿಯಾಗಿ ಬಿಯು ನಂಬರ್ ಸಿಗುತ್ತಿಲ್ಲ, ಕೊವಿಡ್ ಪರೀಕ್ಷೆ ಫಲಿತಾಂಶ ಪ್ರಯೋಜನವಿಲ್ಲ, ಆಸ್ಪತ್ರೆಗೆ ದಾಖಲಾಗಲು ಬೆಡ್ ಇರಲ್ಲ ಎಂಬ ಪರಿಸ್ಥಿತಿ ಎದುರಾಗಿದೆ ಎಂದು ಪ್ರತಿನಿತ್ಯ ವರದಿಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಬಿಬಿಎಂಪಿ ವಾರ್ ರೂಮ್ ಉಸ್ತುವಾರಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬದಲಾಯಿಸಿದ್ದರು. ಬಂಗಾಳದ ಚುನಾವಣೆ ಮುಗಿಸಿಕೊಂಡು ಬಂದಿರುವ ಅರವಿಂದ ಲಿಂಬಾವಳಿಗೆ ವಾರ್ ರೂಮ್ ಉಸ್ತುವಾರಿ ನೀಡಲಾಗಿದೆ.
NEWS DESK
TIMES OF BENGALURU