100 ಹಾಸಿಗೆಯುಳ್ಳ ಕೋವಿಡ್ ಕೇಂದ್ರ ಸ್ಥಾಪನೆ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾಲಹಳ್ಳಿಯಲ್ಲಿನ ವಾಯುಪಡೆ ಕೇಂದ್ರದಲ್ಲಿ ನೂರು ಹಾಸಿಗೆಗಳ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಭಾರತೀಯ ವಾಯುಪಡೆ ತೆರೆಯುತ್ತಿದೆ. ಮೇ 6ರಿಂದ, ಆಮ್ಲಜನಕ ಸಾಂದ್ರತೆಯನ್ನೊಳಗೊಂಡ 20 ಹಾಸಿಗೆ ಸೌಲಭ್ಯದ ಕೇಂದ್ರವು ಕಾರ್ಯಾಚರಣೆ ಆರಂಭಿಸಲಿದೆ. ರಾಜ್ಯ ಸರ್ಕಾರದಿಂದ ಆಮ್ಲಜನಕ ಪೂರೈಕೆ ಖಾತ್ರಿಯಾದ ನಂತರ ಇನ್ನುಳಿದ 80 ಹಾಸಿಗೆಗಳ ಸೌಲಭ್ಯವನ್ನು ಕೊರೊನಾ ರೋಗಿಗಳಿಗೆ ಮುಕ್ತವಾಗಿಸಲಾಗುವುದು. ಮೇ 20ರಿಂದ ಈ ಕೇಂದ್ರ ಕಾರ್ಯಾಚರಣೆ ಆರಂಭಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

NEWS DESK

TIMES OF BENGALURU