ನಾವು ಅಂದುಕೊಂಡಂತೆ ಲಾಕ್ ಡೌನ್ ಯಶಸ್ವಿಯಾಗಿಲ್ಲ

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಸಂಪೂರ್ಣ ಲಾಕ್‌ಡೌನ್‌ ಬಗ್ಗೆ ಸಚಿವ ಡಾ.ಸುಧಾಕರ್‌ ಮಹತ್ವದ ಹೇಳಿಕೆ ನೀಡಿದ್ದು, ಮೇ 12ರಂದು ಕರ್ನಾಟಕದಲ್ಲಿ ಇರುವ ಜನತಾ ಕರ್ಫ್ಯೂ ಮುಗಿಯುತ್ತದೆ, ನಾವು ಅಂದುಕೊಂಡ ಹಾಗೇ ಪರಿಸ್ಥಿತಿ ಸುಧಾರಿಸಿಲ್ಲ, ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಮತ್ತೆ ಸಂಪೂರ್ಣ ಲಾಕ್‌ಡೌನ್‌ ಮಾಡುವ ಬಗ್ಗೆ ಸಿಎಂ ಬಳಿ ಚರ್ಚೆ ನಡೆಸಿದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಅಂತ ಹೇಳಿದರು. ಮೇ 15ರ ಬಳಿಕ 18-44 ವಯಸ್ಸಿನವರಿಗೆ ಕರೊನ ಲಸಿಕೆಯನ್ನು ನೀಡಲಾಗುತ್ತದೆ ಅಂಥ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ತಿಳಿಸಿದ್ದಾರೆ. ಅವರು ಇಂದು ನಗರದಲ್ಲಿ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ನಾವು ಅಂದುಕೊಟ್ಟ ಮಟ್ಟಿಗೆ ಲಾಕ್‌ಡೌನ್‌ ಯಶಸ್ವಿಯಾಗಿಲ್ಲ ಈ ನಿಟ್ಟಿನಲ್ಲಿ ಸಿಎಂ ಬಳಿ ಚರ್ಚೆ ನಡೆಸಲಾಗುವುದು ಅಂತ ಹೇಳಿದರು.

NEWS DESK

TIMES OF  BENGALURU