57 ಲಕ್ಷ ರೂ ಚಿನ್ನಾಭರಣ ದೋಚಿದ ಕಳ್ಳರು

ಬೆಂಗಳೂರು: ತೋಟದ ಮನೆಗೆ ಹೋಗಿದ್ದ ಬಿಲ್ಡರ್​ ಮನೆಗೆ ನುಗ್ಗಿದ ಕಳ್ಳರು 57 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಆರ್​ಟಿ ನಗರದಲ್ಲಿ ನಡೆದಿದೆ. ಆರ್​ಟಿ ನಗರ ಬಿಲ್ಡರ್ ಬಿ.ಪಿ.ಶ್ರೀಧರ್​ ಮೂರ್ತಿ ಮನೆಯಲ್ಲಿ ಕಳ್ಳತನ ನಡೆದಿದೆ. ಏಪ್ರಿಲ್​ 29ರ ಬೆಳಗ್ಗೆ 6 ಗಂಟೆಗೆ ಶ್ರೀಧರ್​ ಕುಟುಂಬ ಸಮೇತರಾಗಿ ಚಿಕ್ಕಬಳ್ಳಾಪುರದ ತೋಟದ ಮನೆಗೆ ಹೋಗಿದ್ದರು. ಮನೆಯ ಸೆಕ್ಯೂರಿಟಿ ಗಾರ್ಡ್​ ಭರತ್​ ಎಂಬಾತ ಮೇ 3 ರಂದು ಕರೆ ಮಾಡಿ ಮನೆ ಮುಖ್ಯ ದ್ವಾರ ತೆಗೆದಿದೆ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣ ಮನೆಗೆ ಬಂದು ನೋಡಿದಾಗ ಮಲಗುವ ಕೋಣೆಯಲ್ಲಿ ಕಬೋರ್ಡ್​ ಓಪನ್​ ಆಗಿತ್ತು. ಅದರಲ್ಲಿದ್ದ 13.80 ಲಕ್ಷ ರೂ. ನಗದು, 2 ಕೆಜಿ ಬೆಳ್ಳಿ ಮತ್ತು ಚಿನ್ನಾಭರಣ ಸೇರಿದಂತೆ ಒಟ್ಟು 57 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಈ ಕುರಿತು ಆರ್​.ಟಿ.ನಗರದ ದೂರು ನೀಡಲಾಗಿದೆ.

NEWS DESK

TIMES OF BENGALURU