ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ ಜಮೀರ್

ಬೆಂಗಳೂರು: ಬೆಡ್​​ ಬ್ಲಾಕಿಂಗ್​ ಪ್ರಕರಣ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ 17 ಮಂದಿ ಮುಸ್ಲಿಂ ಸಿಬ್ಬಂದಿಯ ಹೆಸರನ್ನು ಮಾತ್ರ ಉಲ್ಲೇಖಿಸಿರುವುದರ ವಿರುದ್ಧ ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್​ ಖಾನ್​​ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್​, 205 ಸಿಬ್ಬಂದಿಯಲ್ಲಿ ಕೇವಲ ಮುಸ್ಲಿಮರ ಹೆಸರನ್ನು ಮಾತ್ರ ಉಲ್ಲೇಖಿಸಿರೋದು ಎಷ್ಟು ಸರಿ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾಡಿದರು. ಭಾವೋದ್ವೇಗಕ್ಕೆ ಒಳಗಾದ ಜಮೀರ್​ ಅವರು ರಂಜಾನ್​ ಸಮಯದಲ್ಲಿ ಹೀಗೆಲ್ಲಾ ಮಾಡುತ್ತಿರಲ್ಲ, ನಿಮಗೆ ಒಳ್ಳೆಯದಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

NEWS  DESK

TIMES OF BENGALURU