ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು: ಕಡಿಮೆ‌ ಬಡ್ಡಿ ದರದಲ್ಲಿ ಸಾಲ‌ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಂ ಹರಿನಾಡರ್ ಎಂಬಾತ ಬಂಧಿತ ಆರೋಪಿ. ವೆಂಕಟರಮಣಿ ಎಂಬುವರಿಗೆ 360 ಕೋಟಿ ಸಾಲ‌ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದ ಈತ! ಸಾಲ ಕೊಡಿಸಲು 7.20 ಕೋಟಿ ಹಣ ಪಡೆದುಕೊಂಡಿದ್ದ. ನಂತರ ವಂಚನೆ ಬೆಳಕಿಗೆ ಬರುತ್ತಿದ್ದಂತೆಯೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಪ್ರಕರಣವನ್ನ ಸಿಸಿಬಿ ಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಆರೋಪಿಯನ್ನ ಕೇರಳದಲ್ಲಿ ಬಂಧನ ಮಾಡಿದೆ. ಈತನಿಂದ ಎರಡು ಕೋಟಿ ಮೌಲ್ಯದ 3.893 ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಜತೆಗೆ ಎಂಟು ಲಕ್ಷಕ್ಕೂ ಅಧಿಕ‌ ನಗದು ಹಾಗೂ ಒಂದು ಇನೋವಾ ಕಾರು ವಶಕ್ಕೆ ಪಡೆಯಲಾಗಿದೆ. ನಡೆದಾಡುವ ಚಿನ್ನದ ಅಂಗಡಿ ಎಂದು ಕರೆಯಲಾಗುತ್ತದೆ.

NEWS DESK

TIMES OF BENGALURU