ಗೌರ್ಮೆಂಟ್ ಆಸ್ಪತ್ರೆ ಸೇರಿದ ಅವರೆಲ್ಲ ಶವವಾಗುತ್ತಿದ್ದಾರೆ

ಬೆಂಗಳೂರು : ಖಾಸಗಿ ಆಸ್ಪತ್ರೆಗೆ ಹೋದವರು ಬದುಕಿ ಬರುತ್ತಿದ್ದಾರೆ, ಸರ್ಕಾರಿ ಆಸ್ಪತ್ರೆಗೆ ಹೋದವರು ಶವವಾಗಿ ಬರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಶ್ರಮದ ಬಗ್ಗೆ ಅನುಮಾನವಿಲ್ಲ ಆದರೆ ಕೊರೊನಾ ಸೋಂಕು ತಡೆಯಲು ಆಗುತ್ತಿಲ್ಲವಲ್ಲ ಎಂದು ಪ್ರಶ್ನಿಸಿದರು.ನಿಮಗೆ ಕೈ ಮುಗಿದು ಕೇಳುತ್ತೇನೆ, ಬಡವರ ಜೀವ ಉಳಿಸಿಕೊಡಿ, ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದೆ, ರಾಜ್ಯದಲ್ಲಿ 56 ಮೆಡಿಕಲ್ ಕಾಲೇಜುಗಳಿವೆ, ಕಾಲೇಜು ವೈದ್ಯರನ್ನು ಕರೆದು ಮಾತನಾಡಿ, ಒಬ್ಬೊಬ್ಬರ ಬಳಿ 700 ಬೆಡ್‌ಗಳಿವೆ ಎಂದರು.

NEWS DESK

TIMES OF BENGALURU