ರೆಮಿಡಿಸಿವಿರ್ ಮಾರಾಟ : 10 ಮಂದಿ ಅರೆಸ್ಟ್

ಬೆಂಗಳೂರು : ಕೊರೊನಾ ಚಿಕಿತ್ಸೆಗೆ ಜೀವ ರಕ್ಷಕವಾಗಿ ಬಳಕೆ ಮಾಡುತ್ತಿರುವ ರೆಮಿಡಿಸಿವಿರ್ ಇಂಜೆಕ್ಷನ್ ನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಉತ್ತರ ವಿಭಾಗ ಹಾಗೂ ಸಿಸಿಬಿಯ ಪೊಲೀಸರು ಒಟ್ಟ 10 ಮಂದಿಯನ್ನು ಬಂಧಿಸಿದ್ದು, ಅವರಿಂದ 25 ಬಾಟಲ್ ಔಷಧಿಯನ್ನು ವಶ ಪಡಿಸಿಕೊಂಡಿದ್ದಾರೆ.ಉತ್ತರ ವಿಭಾಗದ ವ್ಯಾಪ್ತಿಯ ಜೆ.ಸಿ.ನಗರದ ಪೊಲೀಸರು ಮೂರು ಜನರನ್ನು ಬಂಧಿಸಿ 12 ಜಂಜೆಕ್ಷನ್ ಗಳನ್ನು, ಸುಬ್ರಮಣ್ಯನಗರದ ಪೊಲೀಸರು ಮೂವರನ್ನು ಬಂಧಿಸಿ 13 ಇಂಜಕ್ಷನ್ ಗಳನ್ನು ವಶ ಪಡಿಸಿಕೊಂಡಿದ್ದರೆ, ಸಿಸಿಬಿ ನಾಲ್ಕು ಜನರನ್ನು ಬಂಧಿಸಿ 12 ಇಂಜಕ್ಷನ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

NEWS DESK

TIMES OF BENGALURU