ಅಣ್ಣಮ್ಮ ದೇವಿಯ ದರ್ಶನ ಪಡೆದ ಸಿಎಂ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದ್ದು, ಈ ನಡುವೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಬೆಳಗ್ಗೆ ನಗರದಲ್ಲಿರುವ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್ ದೂರ ಆಗಬೇಕು ಎಂದು ದೇವರಿಗೆ ಪ್ರಾರ್ಥನೆ ಮಾಡಿದ್ದೇನೆ.

ರಾಜ್ಯದಲ್ಲಿ ಕೋವಿಡ್ ಜಾಸ್ತಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಹತ್ವದ ಸಭೆ ಕರೆಯಲಾಗಿದೆ. ಜನತಾ ಕಫ್ರ್ಯೂ ಯಾರು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಬಿಗಿ ಕ್ರಮ ಅನಿವಾರ್ಯವಾಗಿದೆ, ಲಾಕ್ ಡೌನ್ ಅನಿವಾರ್ಯ ಆಗಬಹುದು ಎಂದಿದ್ದಾರೆ.

NEWS DESK

TIMES OF BENGALURU