ಹೋಟೆಲ್​ಗಳಲ್ಲಿ ಬೆಡ್ ವ್ಯವಸ್ಥೆಗೆ ಚಿಂತನೆ

ಬೆಂಗಳೂರು: ನಗರದಲ್ಲಿ ಹೆಚ್ಚುವರಿ ಬೆಡ್​ಗಳು ಮತ್ತು ಆಕ್ಸಿಜನ್​ ಸರಬರಾಜು ಬೇಕಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಗೌರವ್​ ಗುಪ್ತಾ ಹೇಳಿದ್ದಾರೆ. ನಗರ ವ್ಯಾಪ್ತಿಯ ಚಿಕ್ಕಚಿಕ್ಕ ಆಸ್ಪತ್ರೆಗಳಲ್ಲೂ ಆಕ್ಸಿಜನ್ ವ್ಯವಸ್ಥೆ ಮಾಡುತ್ತೇವೆ. ಕೊವಿಡ್ ಕೇರ್ ಸೆಂಟರ್‌ನಲ್ಲಿ 2000 ಬೆಡ್‌ಗಳಿವೆ. ಅದರಲ್ಲಿ 160 ಆಕ್ಸಿಜನ್ ಬೆಡ್‌ಗಳು ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 15 ಸಾವಿರ ಹೋಟೆಲ್​ಗಳಲ್ಲಿ ಬೆಡ್ ವ್ಯವಸ್ಥೆಗೆ ಚಿಂತನೆ ಮಾಡಿದ್ದೇವೆ. ಬೇರೆಬೇರೆ ದೇಶಗಳಿಂದ ಆಕ್ಸಿಜನ್ ತರಿಸಲು ಸರ್ಕಾರ ಆಲೋಚನೆ ಮಾಡುತ್ತಿದೆ. ಸರ್ಕಾರಿ, ಮೆಡಿಕಲ್ ಕಾಲೇಜಿನಲ್ಲಿ ICU ಬೆಡ್​ಗಳ ಸಂಖ್ಯೆ ಹೆಚ್ಚಿಸುತ್ತೇವೆ. ಜನರಲ್ ಬೆಡ್‌ಗೆ ಆಕ್ಸಿಜನ್ ವ್ಯವಸ್ಥೆ ಮಾಡುತ್ತೇವೆ ಎಂದರು .

NEWS DESK

TIMES OF BENGALURU