ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವ್ರು ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದ್ದು, ಸಂಜೆ ೬ ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವ್ರನ್ನ ಭೇಟಿಯಾಗಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ವಿಶೇಷ ವಿಮಾನದಲ್ಲಿ ಗೃಹ ಸಚಿವರು ಬಸವರಾಜ ಬೊಮ್ಮಾಯಿ, ಎಜಿ ಪ್ರಭುಲಿಂಗ ನಾವದಗಿ, ಬಿ. ವೈ ವಿಜಯೇಂದ್ರ ಸೇರಿ ಐವರು ಮಧ್ಯಾಹ್ನ ೧ ಗಂಟೆಗೆ ಹೆಚ್ಎಎಲ್ ಏರ್ಪೋರ್ಟ್ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗ್ತಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವ್ರನ್ನ ಭೇಟಿಯಾಗಿ ಕೆಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಇನ್ನು ಅನೇಕ ರಾಷ್ಟ್ರ ನಾಯಕರನ್ನ ಭೇಟಿಯಾಗಿ ರಾಜ್ಯದ ಕೆಲವೊಂದಿಷ್ಟು ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ.
NEWS DESK
TIMES OF BENGALURU