25 ಸಂಸದರು ರಾಜೀನಾಮೆ ಕೊಟ್ಟು ತೊಲಗಿ

ಬೆಂಗಳೂರು: ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ನಿರಾಕರಿಸಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರ‍ಿಂ ಕೋರ್ಟ್ ಬಿಸಿ ಮುಟ್ಟಿಸಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 25 ಸಂಸದರು ಏನು ಮಾಡುತ್ತಿದ್ದೀರಿ ರಾಜೀನಾಮೆ ಕೊಟ್ಟು ತೊಲಗಿ ಎಂದು ಆಗ್ರಹಿಸಿದೆ.

ರಾಜ್ಯದ ಜನತೆಯ ಜವಾಬ್ದಾರಿ ಇದ್ದಿದ್ದು – 25 ಸಂಸದರಿಗೆ ಜನತೆಯ ರಕ್ಷಣೆಯ ಹೊಣೆ ಇದ್ದಿದ್ದು – ರಾಜ್ಯ ಬಿಜೆಪಿ ಸರ್ಕಾರಕ್ಕೆ, ಕರ್ನಾಟಕದ ಮೇಲೆ ಆಕ್ಸಿಜನ್ ಯುದ್ಧ ಸಾರಿದ್ದ ಮೋದಿ ಸರ್ಕಾರದ ಯಾರೊಬ್ಬರೂ ಮಾತಾಡದೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳು ನೆರವಿಗೆ ನಿಂತು, ಜನರ ಪರವಾಗಿ ಮಾತನಾಡುವ ಸ್ಥಿತಿ ಬಂದಿದ್ದು ಬಿಜೆಪಿ ಆಡಳಿತದ ಅಧೋಗತಿಗೆ ಸಾಕ್ಷಿ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.

NEWS DESK

TIMES OF BENGALURU