ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ

ಬೆಂಗಳೂರು : ನಗರದ ಬಿಬಿಎಂಪಿ ವಾರ್ ರೂಂ ನಲ್ಲಿ ಕೋವಿಡ್ ಹಾಸಿಗೆಗಳ ಬ್ಲಾಕ್ ಮಾಡುವ ಹಗರಣ ಪತ್ತೆ ಮಾಡುವಾಗ ನಾವು ಯಾವುದೇ ಒಂದು ಕೋಮಿನ ಜನರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿಲ್ಲ. ನಮಗೆ ಸಂವಿಧಾನವೇ ಪರಮೋಚ್ಛ. ಪ್ರತಿಯೊಂದು ಜಾತಿ, ಜನಾಂಗದ ಎಲ್ಲರೂ ನಮಗೆ ಸಮಾನರು ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ. ನಗರದ ನ್ಯಾಷನಲ್ ಕಾಲೇಜ್ ಬಳಿ ಇರುವ ವಾಸವಿ ಕನ್ವೆನ್ಷನ್ ಸೆಂಟರ್ ನಲ್ಲಿ 40 ಬೆಡ್ ಗಳ ಕೋವಿಡ್ ಎಮರ್ಜೆನ್ಸಿ ಆಕ್ಸಿಜನ್ ಸೆಂಟರ್ ಕೇಂದ್ರವನ್ನಾಗಿ ಪರಿವರ್ತನೆ ಮಾಡಲಾಗಿದೆ. ಶಾಸಕ ಉದಯ ಗರುಡಾಚಾರ್ ಹಾಗೂ ವಾಸವಿ ಸಂಸ್ಥೆಯ ಮುಖ್ಯಸ್ಥರು ಸ್ಥಳಕ್ಕೆ ಭೇಟಿ ನೀಡಿ ಆಕ್ಸಿಜನ್ ಅಳವಡಿಕೆ ಬೆಡ್ ಗಳ ಪರಿಶೀಲನೆ ನಡೆಸಿದರು.

NEWS DESK

TIMES OF BENGALURU