ವಿಮಾನ ಪ್ರಯಾಣಿಕರಿಗೆ ಕೊರೋನಾ ವರದಿ ಕಡ್ಡಾಯವಲ್ಲ

ಬೆಂಗಳೂರು : ಕೊರೋನಾ ಸೋಂಕಿನ 2ನೇ ಅಲೆಯ ಅಬ್ಬರಿಸುತ್ತಿರುವ ಈ ಸಂದರ್ಭದಲ್ಲಿ, ನೆರೆ ಮಹಾರಾಷ್ಟ್ರ, ಕೇರಳ, ಪಂಜಾಬ್ ಹಾಗೂ ಚಂಡೀಗಢದಿಂದ ರಾಜ್ಯಕ್ಕೆ ಬರೋರಿಗೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿತ್ತು. ಇದೀಗ ಕೊರೋನಾ ಸೋಂಕಿನ ಲಕ್ಷಣಗಳಿದ್ದವರು ಮಾತ್ರವೇ ಕೊರೋನಾ ನೆಗೆಟಿವ್ ವರದಿ ನೀಡುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ಈ ಕುರಿತಂತೆ ಸುತ್ತೋಲೆ ಹೊರಡಿಸಿರುವಂತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಈ ಮೊದಲು ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತಿದ್ದಂತ ಮಹಾರಾಷ್ಟ್ರ, ಕೇರಳ, ಪಂಜಾಪ್ ಹಾಗೂ ಚಂಡೀಗಢದಿಂದ ರಾಜ್ಯಕ್ಕೆ ಬರುವಂತ ವಿಮಾನ ಪ್ರಯಾಣಿಕರಿಗೆ ಕಡ್ಡಾಯವಾಗಿ 72 ಗಂಟೆ ಹಿಂದೆ ಪರೀಕ್ಷೆಗೆ ಒಳಪಟ್ಟಂತ ಆರ್ ಟಿ ಪಿಸಿಆರ್ ಮೂಲಕ ಪರೀಕ್ಷಿಸಿದಂತ ಕೊರೋನಾ ನೆಗೆಟಿವ್ ವರದಿ ಹಾಜರುಪಡಿಸೋದು ಕಡ್ಡಾಯಗೊಳಿಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಇಂತಹ ನಿಯಮವನ್ನು ನಿಲ್ಲಿಸಲು ಸೂಚಿಸಲಾಗುತ್ತಿದೆ.

NEWS DESK

TIMES OF BENGALURU