ಮದ್ಯ ಪ್ರಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು : ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಘೋಷಣೆಯಾಗಿದ್ದಂತ ಕೊರೋನಾ ಕರ್ಪ್ಯೂನಿಂದ ಕೊರೋನಾ ನಿಯಂತ್ರಣಗೊಂಡಿಲ್ಲ. ಹೀಗಾಗಿ ರಾಜ್ಯಾಧ್ಯಂತ ಮೇ. 10 ರಿಂದ ಮೇ. 24 ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗುತ್ತಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ
ಇನ್ನೂ, ಮದ್ಯ ಪ್ರಿಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಮದ್ಯ ಪಾರ್ಸೆಲ್ ಕೊಂಡೊಯ್ಯಲು ಅವಕಾಶ ನೀಡಿದೆ, ಹೌದು, ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ಸಾಮಾನು ಖರೀದಿಗೆ ಅವಕಾಶ ನೀಡಿದ್ದು, ಈ ಸಮಯದಲ್ಲಿ ಮದ್ಯ ಪ್ರಿಯರು ಎಣ್ಣೆಯನ್ನು ಮನೆಗೆ ಪಾರ್ಸೆಲ್ ಕೊಂಡೊಯ್ಯಬಹುದಾಗಿದೆ ಎಂದು ರಾಜ್ಯ ಸರ್ಕಾರದ ಮಾರ್ಗಸೂಚಿ ತಿಳಿಸಿದೆ.

NEWS DESK

TIMES OF BENGALURU