ಅಕ್ರಮ ಕೊರೋನಾ ಪರೀಕ್ಷೆ ನಡೆಸುತ್ತಿದ್ದವರು ಅರೆಸ್ಟ್

ಬೆಂಗಳೂರು: ಖಾಸಗಿ ಲ್ಯಾಬ್​​ಗಳ ಸ್ವಾಬ್ ಮಾದರಿಗಳನ್ನು ಸರ್ಕಾರಿ ಆಸ್ಪತ್ರೆಗೆ ತಂದು ಅಕ್ರಮವಾಗಿ ಕೊರೊನಾ ಪರೀಕ್ಷೆ ನಡೆಸಿ ಹಣ ಪಡೆಯುತ್ತಿದ್ದ ಯಲಹಂಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮೂವರು ಲ್ಯಾಬ್ ಟೆಕ್ನಿಷಿಯನ್​​ಗಳನ್ನು ಮತ್ತು ಓರ್ವ ಖಾಸಗಿ ಲ್ಯಾಬ್ ಮಾಲೀಕನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಯಲಹಂಕದ ನಿವಾಸಿಗಳಾದ ಪದ್ಮನಾಭ (38), ಸತೀಶ್(32), ಪುನೀತ್(31) ಹಾಗೂ ಭವಿ ರೆಡ್ಡಿ (25) ಬಂಧಿತರು.

ಆರೋಪಿಗಳಾದ ಪದ್ಮನಾಭ, ಸತೀಶ್ ಮತ್ತು ಪುನೀತ್ ಯಲಹಂಕದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಭವಿ ರೆಡ್ಡಿ ಕೊಡಿಗೇಹಳ್ಳಿಯಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ. ಆರೋಪಿಗಳು ಪ್ರತಿನಿತ್ಯ ಖಾಸಗಿ ಲ್ಯಾಬ್​ಗಳ 30 ರಿಂದ 40 ಸ್ಯಾಂಪಲ್​​ಗಳಿಗೆ ಅಕ್ರಮವಾಗಿ ಸರ್ಕಾರಿ ಪ್ರಯೋಗಾಲಯದಲ್ಲಿ ಉಚಿತ ಪರೀಕ್ಷೆ ನಡೆಸಿ ವರದಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

NEWS DESK

TIMES OF BENGALURU