ಕೋವಿಡ್‌ನಿಂದ ಬಳಲುತ್ತಿರುವ ಕ್ರೀಡಾಪಟುಗಳಿಗೆ ನೆರವಾಗಿ

ಬೆಂಗಳೂರು: ಕೊರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಾಜಿ ಕ್ರಿಕೆಟ್ ಆಟಗಾರರು, ಅಂಪೈರ್‌ಗಳು ಮತ್ತು ಇತರ ಕ್ರೀಡಾಪಟುಗಳ ನೆರವಿಗೆ ಧಾವಿಸುವಂತೆ ವಿಧಾನ ಪರಿಷತ್ ಸದಸ್ಯ ಮೋಹನ ಕುಮಾರ್ ಕೊಂಡಜ್ಜಿ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು (ಕೆಎಸ್‌ಸಿಎ) ಆಗ್ರಹಿಸಿದ್ದಾರೆ. ಕ್ರೀಡಾಪಟುಗಳನ್ನು ನಾನು ಗೌರವಿಸುತ್ತೇನೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಹಾಕಿ ತಂಡದಲ್ಲಿದ್ದ ರವೀಂದ್ರ ಪಾಲ್ ಸಿಂಗ್ ಮತ್ತು ಕೌಶಿಕ್ ಅವರನ್ನು ಕೋವಿಡ್‌ನಿಂದಾಗಿ ಕಳೆದುಕೊಳ್ಳಬೇಕಾಗಿ ಬಂದದ್ದು ಬೇಸರದ ವಿಷಯ ಎಂದು ಅವರು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಮತ್ತು ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಹಾಗೂ ಅಂಪೈರ್‌ಗಳ ನೆರವಿಗಾಗಿ ತಂಡವೊಂದನ್ನು ರಚಿಸಿರುವುದು ಸಂತಸದ ಸಂಗತಿ. ಕೆಎಸ್‌ಸಿಎ ಕೂಡ ಇದೇ ರೀತಿಯ ತಂಡವೊಂದನ್ನು ರಚಿಸಿ ಕ್ರೀಡಾಪಟುಗಳಿಗೆ ನೆರವಾಗಬೇಕು. ಮಾಜಿ ಕ್ರಿಕೆಟರುಗಳು, ಅಂಪೈರ್‌ಗಳು ಮತ್ತು ಇತರ ಕ್ರೀಡಾಪಟುಗಳು ಯಾರಾದರೂ ಕೋವಿಡ್‌ನಿಂದ ಬಳಲುತ್ತಿದ್ದರೆ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

NEWS DESK

TIMES OF BENGALURU