ಸದ್ಯಕ್ಕೆ ಬೆಂಗಳೂರಿಗೆ ಬೈ ಬೈ

ಬೆಂಗಳೂರು: ಮೊದಲನೆಯ ಅಲೆಗಿಂತ ಜೋರಾಗಿ ವ್ಯಾಪಿಸಿರುವ ಕೊರೊನಾ ಎರಡನೇ ಅಲೆ ಇದೀಗ ಬೆಂಗಳೂರಿಗೆ ಬಂದಿರುವ ಜನರು ಊರು ಬಿಡುವಂತೆ ಮಾಡಿದೆ. ಹೆಚ್ಚಾಗುತ್ತಿರುವ ಸೋಂಕಿನ ಪ್ರಕರಣಗಳು, ಸೋಂಕಿನಿಂದಾದ ಸಾವುಗಳ ಪೈಕಿ ಅತಿದೊಡ್ಡ ಪ್ರಮಾಣ ಬೆಂಗಳೂರಿನದ್ದೇ ಆಗಿರುವುದರಿಂದ ಆತಂಕಕ್ಕೆ ಒಳಗಾಗಿರುವ ಜನರು, ಬಾರದೂರಿಗೆ ಹೋಗುವ ಬದಲು ಬಂದೂರಿಗೆ ಹೋಗುವುದೇ ಉತ್ತಮ ಎಂದು ಮರಳಿ ಊರಿಗೆ ಹೊರಟಿದ್ದಾರೆ.

ಹೊಟ್ಟೆಪಾಡಿಗಾಗಿ ರಾಜ್ಯದ ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಜನರಲ್ಲಿ ಹಲವರು ಕೊರೊನಾ ಹಾವಳಿ ತಗ್ಗದಿರುವುದರಿಂದ ಮತ್ತು ಇಂದಿನಿಂದ ಜಾರಿಗೆ ಬರಲಿರುವ ಕಟ್ಟುನಿಟ್ಟಿನ ಲಾಕ್​ಡೌನ್​ನಿಂದ ಚಿಂತಿತರಾಗಿ, ಇನ್ನಿಲ್ಲಿದ್ದು ಏನು ಮಾಡುವುದು ಎಂದುಕೊಂಡ ತಮ್ಮೂರಿನ ಕಡೆಗೆ ಹೊರಟ ದೃಶ್ಯಗಳು ಬೆಂಗಳೂರಿನಲ್ಲಿ  ಹಲವೆಡೆ ಕಂಡುಬಂದಿವೆ.

NEWS DESK

TIMES OF BENGALURU