ಈ ಬಾರಿಯು ಪದಕ ಗೆಲ್ಲುವ ವಿಶ್ವಾಸವಿದೆ

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮಗೆ ಪದಕ ಗೆಲ್ಲುವ ಉತ್ತಮ ಅವಕಾಶ ಮತ್ತು ಸಾಮರ್ಥ್ಯ ಇದೆ ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಟೋಕಿಯೊ ಕೂಟಕ್ಕಾಗಿ ಕಾತರದಿಂದ ಕಾಯುತ್ತಿರುವುದಾಗಿ ಅವರು ಹೇಳಿದ್ದಾರೆ. ಭಾರತ ತಂಡ ಇದುವರೆಗೆ ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿದೆ. 1980ರಲ್ಲಿ ಮಾಸ್ಕೋದಲ್ಲಿ ಗೆದ್ದಿದ್ದು ಕೊನೆಯದು.ಈ ಬಾರಿ ನಾವು ಪದಕ ಗೆಲ್ಲುವ ಅವಕಾಶದ ಬಗ್ಗೆ ಅಪಾರ ವಿಶ್ವಾಸವಿದೆ. ಈ ವಿಶ್ವಾಸವೇ ನಮಗೆ ಪ್ರೇರಣೆ ಮತ್ತು ಆಶಾವಾದವನ್ನು ತುಂಬಿದೆ ಎಂದು ಒಲಿಂಪಿಕ್ಸ್‌ ಆರಂಭಕ್ಕೆ 75 ದಿನ ಬಾಕಿ ಉಳಿದಿರುವ ಸಂದರ್ಭದಲ್ಲಿ ಮನ್‌ಪ್ರೀತ್ ಮಾತನಾಡಿದರು.

NEWS DESK

TIMES OF BENGALURU