ಬೆಂಗಳೂರು ಎಫ್ ಸಿ ತಂಡಕ್ಕೆ ವಾರ್ನಿಂಗ್

ಭಾರತದಲ್ಲಿ ಕೊರೋನಾ ಸಂಖ್ಯೆ ಮೀತಿ ಮೀರಿದರೆ, ವಿದೇಶಗಳಲ್ಲೂ ಕೊರೋನಾ ಗಣನೀಯವಾಗಿ ಏರಿಯಾಗುತ್ತಿದೆ. ಪ್ರತಿ ರಾಷ್ಟ್ರದಲ್ಲೂ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ. ಬೆಂಗಳೂರು ಎಫ್‌ಸಿ ತಂಡಕ್ಕೆ ಖಡಕ್ ಸೂಚನೆ ನೀಡಿದ ಘಟನೆ ವರದಿಯಾಗಿದೆ. ಕೊರೋನಾ ನಿಯಮ ಉಲ್ಲಂಘಿಸಿದ ಕಾರಣ ತಕ್ಷಣವೇ ಮಾಲ್ಡೀವ್ಸ್ ತೊರೆಯಲು ಸಚಿವರು ವಾರ್ನಿಂಗ್ ನೀಡಿದ್ದಾರೆ. ಪರಿಣಾಮ ಬಿಎಫ್‌ಸಿ ಇದೀಗ ಭಾರತದತ್ತ ಪ್ರಯಾಣ ಬೆಳೆಸಿದೆ. ಎಎಫ್‌ಸಿ ಕಪ್ ಫುಟ್ಬಾಲ್ ಟೂರ್ನಿಗಾಗಿ ಬೆಂಗಳೂರ ಎಫ್‌ಸಿ ತಂಡ ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿತ್ತು. ನಿಯಮದ ಪ್ರಕಾರ ಎಲ್ಲಾ ಆಟಗಾರರು ಕ್ವಾರಂಟೈನ್ ಪಾಲಿಸಬೇಕಿತ್ತು. ಆದರೆ ಬೆಂಗಳೂರು ಎಫ್‌ಸಿ ತಂಡದ ಆಟಗಾರರು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ .

NEWS DESK

TIMES OF BENGALURU