ಇಂದಿನಿಂದ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ 

ಕೊರೊನಾಗೆ ಕಡಿವಾಣ ಹಾಕಲು ರಾಜ್ಯದಾದ್ಯಂತ ಮೇ 10 ರಿಂದ ಮೇ 24 ರ ಬೆಳಿಗ್ಗೆಯವರೆಗೆ ಲಾಕ್ ಡೌನ್ ಜಾರಿಗೊಳಿಸಿದ್ದು, ಈ ಅವಧಿಯಲ್ಲಿ ಬೆಂಗಳೂರಿನಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇನ್ನೂ ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೊರೊನಾ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಿರುತ್ತಾರೆ.

ಅದರಂತೆ ಮೇ.10 ರಿಂದ ಮೇ.24ರ ಬೆಳಿಗ್ಗೆ 6 ಗಂಟೆಯವರೆಗೆ ಬೆಂಗಳೂರು ನಗರದಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನೂ ಈ ನಿಯಮವನ್ನು ಮೀರುವವರ ವಿರುದ್ಧ ಡಿಎಂಎ 2005ರ ಕಾಯ್ದೆಯ 51 ರಿಂದ 60ರ ಅಡಿಯಲ್ಲಿ ಹಾಗೂ ಐಪಿಸಿ 188 ಸೆಕ್ಷನ್, ಕೆಇಡಿಎ ಕಾಯ್ದೆ 2020ರ ಸೆಕ್ಷನ್ 4, 5 ಮತ್ತು 10ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

NEWS DESK

TIMES OF BENGALURU