ಅಮಾಯಕರಿಗೆ ಬಲೆ ಬೀಸುತ್ತಿರುವ ಸೈಬರ್ ಖದೀಮರು

ಬೆಂಗಳೂರು :ಕೊರೊನಾ ಸೋಂಕು ಮತ್ತು ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಜನರು ಒಂದಿಲ್ಲೊಂದು ರೀತಿಯಲ್ಲಿ ಆನ್​ಲೈನ್​ ವ್ಯವಹಾರಕ್ಕೆ ಮೊರೆ ಹೋಗಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್​ ಖದೀಮರು ಅಮಾಯಕರಿಗೆ ಬಲೆ ಬೀಸಿ ಸಂಕಷ್ಟದಲ್ಲಿಯೂ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ.

ವಿಲ್ಸನ್​ ಗಾರ್ಡನ್​ ನಿವಾಸಿ ಆನ್​ಲೈನ್​ನಲ್ಲಿ ಔಷಧ ಆರ್ಡರ್​ ಮಾಡಿದ್ದರು. ಔಷಧ ಬರುವುದು ತಡವಾದ ಕಾರಣಕ್ಕೆ ಕಂಪನಿಯ ವಾಟ್ಸ್​ಆಯಪ್​ ನಂಬರ್​ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ಮೆಡಿಸಿನ್​ ಆಸ್ಪತ್ರೆಗೆ ಪಾರ್ಸೆಲ್​ ಕಳುಹಿಸುತ್ತೇವೆ. ಮುಂಗಡವಾಗಿ ಹಣ ಪಾವತಿ ಮಾಡಬೇಕೆಂದು ಹಂತ ಹಂತವಾಗಿ 85 ಸಾವಿರ ರೂ.ಗಳನ್ನು ತನ್ನ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾನೆ. ಔಷಧ ಮಾತ್ರ ಗ್ರಾಹಕನ ಕೈ ಸೇರಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವ ವಿಚಾರ ಗೊತ್ತಾಗಿ ಕೇಂದ್ರ ವಿಭಾಗ ಸಿಇಎನ್​ ಠಾಣೆಗೆ ದೂರು ನೀಡಿದ್ದಾರೆ.

NEWS DESK

TIMES OF BENGALURU