ಆರ್ ಟಿ ಓ ಅಧಿಕಾರಿಗಳಿಂದ 4 ಬಸ್ ಜಪ್ತಿ

ಬೆಂಗಳೂರು : ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ಕಳ್ಳ ಮಾರ್ಗದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ನಾಲ್ಕು ಬಸ್‌ಗಳನ್ನು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾದ ನರೇಂದ್ರ ಹೋಳ್ಕರ್‌ ನೇತೃತ್ವದ ತಂಡ ದಾಳಿ ಮಾಡಿ ಜಫ್ತು ಮಾಡಿದೆ. ಕೋವಿಡ್‌ ನಿಯಮಾವಳಿಗಳ ಪ್ರಕಾರ ಯಾವುದೇ ಬಸ್‌ಗಳು ಕಾರ್ಯಾರಣೆ ಮಾಡುವಂತಿಲ್ಲ. ಆದರೆ, ಈ ನಾಲ್ಕೂ ಖಾಸಗಿ ಬಸ್‌ಗಳು ಈ ನಿಯಮಾವಳಿಯನ್ನು ಉಲ್ಲಂಘಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಬಾಗೇಪಲ್ಲಿ, ಅತ್ತಿಬೆಲೆ ಮತ್ತು ಎಸ್ಟಿಮ್‌ ಮಾಲ್‌ ಬಳಿ ದಾಳಿ ನಡೆಸಿ ಈ ಬಸ್‌ಗಳನ್ನು ಜಫ್ತು ಮಾಡಲಾಗಿದೆ.

NEWS DESK

TIMES OF BENGALURU