ಬೆಡ್ ಬ್ಲಾಕಿಂಗ್ ದಂಧೆ: ಮತ್ತಿಬ್ಬರು ಅರೆಸ್ಟ್

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದ ಕೋವಿಡ್​ ಬೆಡ್​ ಬ್ಲಾಕಿಂಗ್​ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಸಿಸಿಸಿ ಪೊಲೀಸರು ಬಂಧಿಸಿದ್ದಾರೆ. ಸುಧೀರ್ ಹಾಗೂ ವೆಂಕೋಬ ರಾವ್ ಬಂಧಿತ ಆರೋಪಿಗಳು

ಖಾಸಗಿ ಆಸ್ಪತ್ರೆಯ ಸಿಬ್ಬಂಧಿಯಾಗಿರುವ ಆರೋಪಿಗಳು ಎರಡು ಖಾಸಗಿ ಆಸ್ಪತ್ರೆಯಲ್ಲಿ ರೋಗಿ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡಿದ್ದಾರೆ. ಆದರೆ ಸಿಸಿಬಿ ವಿಚಾರಣೆ ವೇಳೆ ರೋಗಿಗಳು ಡಿಸ್ಚಾರ್ಜ್ ಆಗಿದ್ದು ಬಯಲಿಗೆ ಬಂದಿದೆ. ರೋಗಿಗಳು ಒಂದೆರಡು ದಿನಗಳವರೆಗೆ ಚಿಕಿತ್ಸೆ ಪಡೆದು ತೆರಳಿದ್ದರು ಸಹ ಆರೋಪಿಗಳು ಅದೇ ರೋಗಿಯ ಹೆಸರಲ್ಲಿ ಬೆಡ್​ ಮುಂದುವರಿಸಿದ್ದರು ಎನ್ನಲಾಗಿದೆ.

NEWS DESK

TIMES OF BENGALURU