ಅಭಿಮಾನಿಗಳಿಗೆ ಜೀವನದ ಪಾಠ ಹೇಳಿದ ಕಿಚ್ಚ

ಬೆಂಗಳೂರು : ಅನಾರೋಗ್ಯದಿಂದಾಗಿ 3 ವಾರದಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಕಿಚ್ಚ ಸುದೀಪ್, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಜನರ ಪರಿಸ್ಥಿತಿಯಲ್ಲಿ ಅಭಿಮಾನಿಗಳಿಗೆ ಜೀವನದ ಪಾಠ ಮಾಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ದಿನವನ್ನು ನೀವು ಕಾಣುತ್ತಿದ್ದೀರಾ ಎಂದರೇ ಅದು ಆಶೀರ್ವಾದ. ಪ್ರತಿಕ್ಷಣ ನೀವು ಖುಷಿಯಾಗಿರುತ್ತೀರಾ ಎಂದರೆ ಅದು ನಿಮಗೆ ಸಿಕ್ಕ ದೊಡ್ಡ ಉಡುಗೊರೆ ಎನ್ನುವ ಮೂಲಕ ಪ್ರಸ್ತುತ ಸ್ಥಿತಿಯ ಬಗ್ಗೆ ನಟ ಕಿಚ್ಚ ಸುದೀಪ್ ಎರಡೇ ಅಕ್ಷರದಲ್ಲಿ ಬದುಕಿನ ಸತ್ಯ ತಿಳಿಸಿದ್ದಾರೆ. ಪ್ರಕೃತಿ ಮತ್ತು ಜೀವನವನ್ನು ಯಾರು ಕೂಡ ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಅಭಿಮಾನಿಗಳಿಗೆ ಜೀವನದ ಪಾಠ ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿ ಎಲ್ಲರಲ್ಲಿಯೂ ಆತಂಕ ಸೃಷ್ಟಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನವನ್ನು ಸಂತೋಷದಿಂದ ಕಳೆಯಬೇಕು ಎಂದು ಸೋಷಿಯಲ್ ಮಿಡಿಯಾದಲ್ಲಿ ಕಿಚ್ಚ ಹೇಳಿದ್ದಾರೆ.

NEWS DESK

TIMES OF BENGALURU