ಸಾರ್ವಜನಿಕರಿಗೆ ಲಾಲ್ ಬಾಗ್ ಪ್ರವೇಶಕ್ಕೆ ನಿರ್ಬಂಧ

ಬೆಂಗಳೂರು : ದಿನೇ ದಿನೇ ಕೊರೊನಾ 2ನೇ ಅಲೆ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಕೊರೊನಾ ಚೈನ್​​​​ಲಿಂಕ್​​​ ಹರಡದಂತೆ ತಡೆಯಲು ಕರ್ನಾಟಕದಲ್ಲಿ ಇಂದಿನಿಂದ ಲಾಕ್​ಡೌನ್​​​ ಘೋಷಿಸಲಾಗಿದೆ. ಈ ನಡುವೆ ಹಲವು ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಲಾಲ್​​​ಬಾಗ್​​ ಗಾರ್ಡನ್​​​ ಸಹ ಲಾಕ್​​ಡೌನ್​​ನಲ್ಲಿ ಬಂದ್ ಆಗಿರಲಿದೆ ಎಂದು ತೋಟಗಾರಿಕಾ ಇಲಾಖೆ ಮಾಹಿತಿ ನೀಡಿದೆ. ಈ ಮೊದಲು ಬೆಳಗ್ಗೆ ಸಾರ್ವಜನಿಕರಿಗೆ ವಾಕಿಂಗ್ ಮಾಡಲು ಇಲಾಖೆ ಅವಕಾಶ ನೀಡಿತ್ತು. ಆದರೆ ನಗರದಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆ ಲಾಕ್​ಡೌನ್ ಅಂತ್ಯದವರೆಗೆ ಲಾಲ್​ಬಾಗ್ ಮುಚ್ಚಲು ನಿರ್ಧರಿಸಿದೆ.