ಮೂವರು ಶಾಸಕರು ಮೇ 4ರಂದು ಕೋವಿಡ್ ವಾರ್ ರೂಂ ಮೇಲೆ ದಾಳಿ ನಡೆಸಿದ ನಂತರ ಅಮಾನತುಗೊಂಡಿದ್ದ 17 ಮಂದಿ ಮುಸ್ಲಿಂ ನೌಕರರು ಇಂದಿನಿಂದ (ಮೇ 10) ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.ಬಿಬಿಎಂಪಿಯಲ್ಲಿ ಹಾಸಿಗೆ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಸಂಸದ ಮತ್ತು ಶಾಸಕರು ಈ ನೌಕರರ ವಿರುದ್ಧ ಹರಿಹಾಯ್ದಿದ್ದರು. ವಾರ್ ರೂಂನಲ್ಲಿ 212 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಮುಸ್ಲಿಂ ಸಮುದಾಯದ ಒಬ್ಬರು ಮಾತ್ರ ಹಾಸಿಗೆ ನಿಯೋಜನೆ ವಿಭಾಗದಲ್ಲಿದ್ದರು. ಕ್ರಿಸ್ಟಲ್ ಇನ್ಫೋ ಸಿಸ್ಟಂ ಅಂಡ್ ಸರ್ವೀಸಸ್ ಎಂಬ ಹೊರಗುತ್ತಿಗೆ ಸಂಸ್ಥೆ ಈ ನೌಕರರನ್ನು ಬಿಬಿಎಂಪಿಗೆ ಪೂರೈಸಿತ್ತು.
NEWS DESK
TIMES OF BENGALURU