ಲಾಕ್ ಡೌನ್ ಹಿನ್ನೆಲೆ ಸೋಂಕಿನ ಪ್ರಕರಣ ತಗ್ಗಿದೆ

ಬೆಂಗಳೂರು: ಕೊರೋನಾ ಹರಡುವಿಕೆಯ ಸರಪಣಿಯನ್ನು ತುಂಡಾಗಿಸಲು ರಾಜ್ಯ ಸರ್ಕಾರ ಇಂದಿನಿಂದ 2 ವಾರಗಳ ಕಾಲ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಇಂದು ಕೊರೋನಾ ಪಾಸಿಟಿವ್​ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ಇಂದು ರಾಜ್ಯದಲ್ಲಿ 39,305 ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲ ದಿನಗಳಿಂದ 50 ಸಾವಿರ ಆಸುಪಾಸಿನಲ್ಲೇ ದಾಖಲಾಗುತ್ತಿದ್ದ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಇಂದು ತಗ್ಗಿದೆ. ನಿನ್ನೆಯಷ್ಟೇ 47,930 ಪಾಸಿಟಿವ್​ ಕೇಸ್​ಗಳ ದಾಖಲಾಗಿದ್ದವು, ನಿನ್ನೆಗಿಂತ ಇಂದು 8,625 ಕೇಸ್​ಗಳು ಕಡಿಮೆ ದಾಖಲಾಗಿವೆ. ನಿನ್ನೆ ಮತ್ತು ಇಂದಿನ ಸೋಂಕಿನ ಪ್ರಮಾಣದಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿರುವುದು ಆಶಾದಾಯಕವಾಗಿದೆ.

NEWS DESK

TIMES OF BENGALURU