ಬೆಂಗಳೂರಿಗೆ ಬಂದಿಳಿದ ಆಕ್ಸಿಜನ್ ಹೊತ್ತ ರೈಲು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರ ಜೊತೆಗೆ ಆಕ್ಸಿಜನ್ ಸಮಸ್ಯೆ ರಾಜ್ಯದಲ್ಲೇ ಜೋರಾಗಿದೆ. ಎಷ್ಟೋ ಜನ ಆಕ್ಸಿಜನ್ ಇಲ್ಲದೆಯೇ ಸಾವನ್ನಪ್ಪಿದ್ದಾರೆ. ಇಂಥ ದುಸ್ಥರ ಸಂದರ್ಭದಲ್ಲಿ ಆಕ್ಸಿಜನ್ ಹೊತ್ತ ಎಕ್ಸ್‌ಪ್ರೆಸ್‌ ರೈಲು ರಾಜ್ಯಕ್ಕೆ ಬಂದಿದೆ. ಕೇಂದ್ರ ಸರ್ಕಾರ ಇದೆ ಮೊದಲ ಬಾರಿಗೆ 120 ಟನ್ ಆಕ್ಸಿಜನ್ ಅನ್ನು ಟ್ರೈನ್ ಮೂಲಕ ಬೆಂಗಳೂರಿಗೆ ಕಳುಹಿಸಿದೆ. ಆರು ಕಂಟೇನರ್ ಗಳಲ್ಲಿ ಆಕ್ಸಿಜನ್ ಹೊತ್ತು ರೈಲು ಬಂದಿದೆ.

NEWS DESK

TIMES OF BENGALURU