ಕೊರೋನಾ ಕಂಟ್ರೋಲ್‍ಗೆ ಜನರ ಸಹಕಾರ ಅತ್ಯಗತ್ಯ

ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನ ನಿಯಂತ್ರಿಸಲು ಜನರ ಸಹಕಾರ ಅತ್ಯಗತ್ಯ. ಜನ ಮಾಸ್ಕ್​ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡಲ್ಲಿ ಮಾತ್ರ ಸೋಂಕನ್ನ ಕಂಟ್ರೋಲ್​ ಮಾಡಬಹುದು ಎಂದು ಸಿಎಂ ಹೇಳಿದ್ರು. ಇನ್ನು ಇದೇ ವೇಳೆ ಕೇಂದ್ರ ಸರ್ಕಾರದ ಬಳಿ ನೆರವು ಕೇಳಲು ದೆಹಲಿಗೆ ಭೇಟಿ ನೀಡುವ ವಿಚಾರವಾಗಿಯೂ ಮಾತನಾಡಿದ ಅವರು, ಪ್ರಧಾನಿ ಮೋದಿ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ಈಗಾಗಲೇ ಜೆಮ್​ಶೆಡ್​ಪುರದಿಂದ ಆಕ್ಸಿಜನ್​ಗಳನ್ನ ಕಳುಹಿಸಿಕೊಟ್ಟಿದೆ. ರಾಜ್ಯ ಸರ್ಕಾರದ ಬೇಡಿಕೆಗಳಿಗೆ ಪ್ರಧಾನಿ ಮೋದಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

NEWS DESK

TIMES OF BENGALURU