ಪೊಲೀಸರಿಂದ 2,410 ವಾಹನಗಳು ಸೀಜ್

ಬೆಂಗಳೂರು: ಕೊರೊನಾ ವೈರಸ್ ಆರ್ಭಟಕ್ಕೆ ದೇಶವೇ ಕಂಗಾಲಾಗಿದ್ದು, ದೇಶದ ಬಹುತೇಕ ರಾಜ್ಯಗಳು ಲಾಕ್ ಡೌನ್ ಘೋಷಿಸಿಕೊಂಡಿವೆ. ಕರ್ನಾಟಕದಲ್ಲೂ ನಿನ್ನೆಯಿಂದ ಲಾಕ್ ಡೌನ್ ಜಾರಿಯಾಗಿದ್ದು, ರಸ್ತೆಗೆ ವಾಹನ ಹತ್ತಿ ಬಂದರೆ ಆ ವಾಹನವನ್ನು ಸೀಜ್ ಮಾಡಲಾಗುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 2,410 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಇಂದು ಬೆಂಗಳೂರು ನಗರದಲ್ಲಿ ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 10-00 ರಿಂದ ರಾತ್ರಿ 08-00 ಗಂಟೆಯವರೆಗೆ 2213 ದ್ವಿಚಕ್ರ, 80 ತ್ರಿಚಕ್ರ & 117 ನಾಲ್ಕು ಚಕ್ರದ ವಾಹನಗಳು ಸೇರಿ ಒಟ್ಟು 2410 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 13 ಎನ್.ಡಿ.ಎಂ.ಎ ಪ್ರಕರಣಗಳನ್ನು ದಾಖಲಿಸಲಾಗಿದೆ.

NEWS DESK

TIMES OF BENGALURU