ಕುಖ್ಯಾತ ರೌಡಿಶೀಟರ್ ಸೂರ್ಯಗೆ ಗುಂಡೇಟು

ಬೆಂಗಳೂರು-ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಸಂಘಟಿತ ಅಪರಾಧ ದಳದ ಪೂರ್ವ ವಲಯ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿರುವ ರೌಡಿಯನ್ನು ಎರಡು ಕೊಲೆ ಹಾಗೂ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ರಾಮಮೂರ್ತಿನಗರದ ರೌಡಿಶೀಟರ್ ಸೂರ್ಯ ಅಲಿಯಾಸ್ ಚಟ್ಟಿ ಎಂದು ಗುರುತಿಸಲಾಗಿದೆ.

ಸೂರ್ಯ ಮತ್ತವನ ಗ್ಯಾಂಗ್ ಕಳೆದ ಮೇ.4 ರಂದು ರಘುರಾಮ್ ಎಂಬುವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿತ್ತು.ಸೂರ್ಯ ಅಂಡ್ ಗ್ಯಾಂಗ್ ಬಂಧನಕ್ಕೆ ಎಸಿಪಿ ಪರಮೇಶ್ವರ್ ನೇತೃತ್ವದ ಸಿಸಿಬಿ ಪೊಲೀಸರ ತಂಡ ಶೋಧ ನಡೆಸುತಿತ್ತು. ಕೆಲ ದಿನಗಳ ಹಿಂದೆ ಸೂರ್ಯ ಮತ್ತವನ ಗ್ಯಾಂಗ್ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್‍ಬಿಆರ್ ಬಡಾವಣೆಯಲ್ಲಿರುವ ಪ್ರವೀಣ್ ಎಂಬುವರ ಮನೆಯಲ್ಲಿ ಅಡಗಿಕೊಂಡಿರುವ ಮಾಹತಿ ದೊರೆಯಿತು. ಮನೆ ಮೇಲೆ ದಾಳಿ ಮಾಡಿದಾಗ ಸೂರ್ಯನ ಸಹಚರರಾದ ಗಿರೀಶ್, ಕಿರಣ್, ಅಜಿತ್, ಪ್ರವೀಣ್ ಹಾಗೂ ರಾಹುಲ್ ಎಂಬುವರು ಪೊಲೀಸರಿಗೆ ಬಿದ್ದಿದ್ದಾನೆ.

NEWS DESK

TIMES OF BENGALURU