ಆಹಾರ ಪಡೆಯಲು ಗುರುತಿನ ಚೀಟಿ ನೀಡಬೇಕಿಲ್ಲ

ಬೆಂಗಳೂರು : ಹೈಕೋರ್ಟ್ ಆಹಾರ ಭದ್ರತೆಯನ್ನು ಒದಗಿಸಿ ಎಂಬುದಾಗಿ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದಂತೆ, ಇಂದಿನಿಂದ ರಾಜ್ಯಾಧ್ಯಂತ ಎಲ್ಲಾ ಇಂದಿರಾ ಕ್ಯಾಂಟಿನ್ ಗಳಲ್ಲಿ ಉಚಿತ ಆಹಾರ ವ್ಯವಸ್ಥೆಯನ್ನು ಮಾಡುವಂತೆ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲಿ ಪೊಟ್ಟಣಗಳ ಮೂಲಕ ಉಚಿತ ಆಹಾರ ನೀಡಲಾಗುತ್ತದೆ. ಆಹಾರ ಪಡೆಯಲು ಗುರುತಿನ ಚೀಟಿ ನೀಡಬೇಕು ಎಂಬುದಾಗಿ ತಿಳಿಸಿತ್ತು. ಆದ್ರೇ ಇಂತಹ ಯಾವುದೇ ಗುರುತಿನ ಚೀಟಿಯನ್ನು ಆಹಾರ ಪಡೆಯುವವರು ನೀಡಬೇಕಿಲ್ಲ ಎಂಬುದಾಗಿ ಬಿಬಿಎಂಪಿ ವಿಶೇಷ ಆಯುಕ್ತರಾದಂತ ಗೌರವ್ ಗುಪ್ತ ತಿಳಿಸಿದ್ದಾರೆ.

NEWS DESK

TIMES OF BENGALURU