ನನ್ನ ಹಳ್ಳಿಯಲ್ಲೂ ಸಾಲುಸಾಲಾಗಿ ಹೆಣಬೀಳುತ್ತಿವೆ

ಬೆಂಗಳೂರು : ಕೋವಿಡ್ ನಿಂದ ಜನರು ದಿನನಿತ್ಯ ಸಾಯುತ್ತಿದ್ದಾರೆ. ಬಡವರು ಎನ್ನದೆ, ಶ್ರೀಮಂತರಾದಿಯಾಗಿ ಎಲ್ಲರೂ ಸಾಲು ಸಾಲಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿಯೂ ಈಗಾಗಾಲೇ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೋವನ್ನು ವ್ಯಕ್ತ ಪಡಿಸಿರುವ ಖ್ಯಾತ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್, ನನ್ನ ಹಳ್ಳಿಯಲ್ಲೂ ಸಾಲು ಸಾಲು ಹೆಣಗಳು ಬೀಳುತ್ತಿವೆ ಎಂದು ಬರೆದಿದ್ದಾರೆ.

ನಮ್ಮ ತಲೆಮಾರು ಇಂಥ ಕರಾಳ ದಿನಗಳಿಗೆ ಸಾಕ್ಷಿಯಾದೀತು ಎಂದು ಯಾರೂ ಎಣಿಸಿರಲಿಲ್ಲ. ಶತಾಯ ಗತಾಯ ಹೋರಾಡಿ ಹಾಸಿಗೆ ಪಡೆದುಕೊಂಡರೆ ದಾಖಲಾಗುವ ಮೊದಲೇ ನಾಲ್ವರು ಮಾರ್ಗ ಮಧ್ಯದಲ್ಲಿ ಮೃತ್ಯುಮಂಚವೇರಿದ್ದಾರೆ. ಕ್ಷೇಮವೆಂದು ನಂಬಿದ್ದ ನನ್ನ ಹಳ್ಳಿಯಲ್ಲೂ ಸಾಲುಸಾಲಾಗಿ ಹೆಣಬೀಳುತ್ತಿವೆ. ಎಲ್ಲರೂ ಅಸಹಾಯಕರಂತೆ ಕಾಣುತ್ತಿದ್ದೇವೆ’ ಎಂದು ನೋವಿನ ಮಾತುಗಳನ್ನು ಆಡಿದ್ದಾರೆ.

NEWS DESK

TIMES OF BENGALURU