ರಂಜನ್ ಹಬ್ಬಕ್ಕೆ ಸಾಮೂಹಿಕ ಪ್ರಾರ್ಥನೆ ರದ್ದು

ಬೆಂಗಳೂರು : ನಾಳೆ ದೇಶಾದ್ಯಂತ ರಂಜಾನ್ ಹಬ್ಬವಿದ್ದು ಸಾಮೂಹಿಕ ಪ್ರಾರ್ಥನೆ ಮಾಡದಂತೆ ನಗರ ಪೊಲೀಸರು ಸೂಚಿಸಿದ್ದಾರೆ. ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮಸೀದಿಯ ಹಜರತ್​ ಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಹಜರತ್ ಗಳಿಗೆ ಹೇಳಿರುವ ಪೊಲೀಸರು, ಮಸೀದಿಗೆ ಜನರು ಬರದಂತೆ ಹೇಳಿ. ಪ್ರಾರ್ಥನೆಯನ್ನು ಮನೆಯಲ್ಲಿಯೇ ಮಾಡಿ ಎಂದು ತಿಳಿಸಿ ಎಂದು ಹೇಳಿದ್ದಾರೆ. ಆಯಾ ಹಜಾರತ್ ಗಳು ತಮ್ಮ ಸುತ್ತ ಮುತ್ತ ಇರುವ ಮುಸಲ್ಮಾನ ಬಾಂಧವರಿಗೆ ತಿಳಿಸುವಂತೆ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

NEWS DESK

TIMES OF BENGALURU