ಕೊರೋನಾ ಲಸಿಕೆ ಪಡೆದ ಸೂಪರ್ ಸ್ಟಾರ್

ನವದೆಹಲಿ : 70 ವರ್ಷದ ರಜನೀಕಾಂತ್ ಅವರು ಚೆನ್ನೈನಲ್ಲಿ ಇಂದು ಕೋವಿಡ್-19 ಲಸಿಕೆಯ ಪಡೆದಿದ್ದಾರೆ.
ಈ ಕುರಿತಂತೆ ಅವರ ಪುತ್ರಿ ಸೌಂದರ್ಯ ಮಾಹಿತಿ ಹಂಚಿಕೊಂಡಿದ್ದು, ನಮ್ಮ ತಲೈವರ್ ಕೊರೋನಾ ಸೋಂಕಿನ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಈ ಯುದ್ಧವನ್ನು ನಾವು ಒಟ್ಟಾಗಿ ಹೋರಾಡೋಣ ಮತ್ತು ಗೆಲ್ಲೋಣ ಎಂಬುದಾಗಿ ಟ್ವಿಟ್ ನಲ್ಲಿ ತಿಳಿಸಿದ್ದಾರೆ.

ರಜನೀಕಾಂತ್ ಯಾವ ಲಸಿಕೆಯನ್ನು ಪಡೆದರು ಎಂಬುದು ಸ್ಪಷ್ಟವಾಗಿಲ್ಲ. ಇದು ಅವರ ಮೊದಲ ಅಥವಾ ಎರಡನೇ ಡೋಸ್ ಎಂಬುದಾಗಿಯೂ ತಿಳಿದು ಬಂದಿಲ್ಲ. ರಜನೀಕಾಂತ್ ಅವರ ದೀರ್ಘಕಾಲದ ಸಹೋದ್ಯೋಗಿ ಮತ್ತು ಸ್ನೇಹಿತ ಕಮಲ್ ಹಾಸನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೊರೋನಾ ಲಸಿಕೆಗಳನ್ನು ಸ್ವೀಕರಿಸುವ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ.

NEWS DESK

TIMES OF BENGALURU