ಬೆಂಗಳೂರು: ಚಂದನವನದ ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಕಳೆದ ವರ್ಷ ಡ್ರಗ್ಸ್ ಕೇಸ್, ಜೈಲು, ಕೋರ್ಟ್ ಅಂತ ಅಲೆದಾಡಿದ್ದ ಗಂಡ-ಹೆಂಡತಿ ಸಿನಿಮಾ ಖ್ಯಾತಿಯ ನಟಿ ವಿರುದ್ಧ ಈಗ ಮತ್ತೊಂದು ಪ್ರಕರಣ ದಾಖಲಾಗಿದೆ. 2019ರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಂಜನಾ ವಿರುದ್ಧ ಎಫ್ಐಆರ್ ದಾಖಲಾಗಿದೆ. 2 ವರ್ಷಗಳ ಹಿಂದೆ ಮಾಡೆಲ್ ವಂದನಾ ಜೈನ್ ಎಂಬುವರೊಂದಿಗೆ ಸಂಜನಾ ಗಲಾಟೆ ದೊಡ್ಡ ಸುದ್ದಿಯಾಗಿತ್ತು.
ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ಕ್ಲಬ್ವೊಂದರಲ್ಲಿ ಪರಸ್ಪರ ಅವಾಚ್ಯ ಶಬ್ಧಗಳಿಂದ ಬೈದಾಡಿಕೊಂಡು, ಹೊಡೆದಾಡಿಕೊಂಡಿದ್ದರ ಬಗ್ಗೆ ಸುದ್ದಿಯಾಗಿತ್ತು. ಸಂಜನಾ ಹಾಗೂ ವಂದನಾ ಜೈನ್ ಇಬ್ಬರೂ ಒಬ್ಬರ ಮೇಲೊಬ್ಬರು ದೂರು ದಾಖಲಿಸಿದ್ದರು.ಮಾಧ್ಯಮಗಳ ಎದುರು ಬಂದಿದ್ದ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು. ಸಂಜನಾ ವಿರುದ್ಧ ಆಗ ದೂರು ನೀಡಿದ್ದ ವಂದನಾ ಜೈನ್ ಕೋರ್ಟ್ನಿಂದ ಪಿಸಿಆರ್ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈಗ ಸಂಜನಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
NEWS DESK
TIMES OF BENGALURU