ವಿಶೇಷ ಪ್ಯಾಕೇಜ್ ಪರಿಹಾರ ನೀಡಲು ಸಾಧ್ಯವಿಲ್ಲ

ಬೆಂಗಳೂರು : ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ಸದ್ಯಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ​ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸ್ಥಿತಿಗತಿ ನೋಡಿಕೊಂಡು ಅವರಿಗೆ ಪರಿಹಾರ ಪ್ಯಾಕೇಜ್​ ನೀಡುವ ಕುರಿತು ತೀರ್ಮಾನ ನಡೆಸಲಾಗುವುದು.

ಬಡವರಿಗೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಊಟ ನೀಡಲಾಗುವುದು ಜೊತೆಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಬಿಪಿಎಲ್​ ಕುಟುಂಬಕ್ಕೆ 5 ಕೆಜಿ ಅಕ್ಕಿ ಕೊಡಲಿದ್ದೇವೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. ಕೊರೋನಾ ಸಂಕಷ್ಟದ ಸಮಯಲ್ಲಿಯೇ ಬಿಪಿರಲ್​ ಕಾರ್ಡುದಾರ 5 ಕಿಜಿ ಅಕ್ಕಿಯನ್ನು ಕಡಿತ ಗೊಳಿಸಲಾಗಿತ್ತು. 5 ಕೆಜಿ ಅಕ್ಕಿಯ ಬದಲು 2 ಕಜಿ 2 ಕಜಿ ಅಕ್ಕಿ ನೀಡಲು ಮುಂದಾಗಿತ್ತು. ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನಲೆ ಮತ್ತೆ ಸರ್ಕಾರ 5 ಕೆಜಿ ಅಕ್ಕಿ ಕೊಡಲು ಮುಂದಾಗಿದೆ.

NEWS DESK

TIMES OF BENGALURU