ಸಿದ್ದರಾಮಯ್ಯನವರೇ ಎಷ್ಟು ಜನರಿಗೆ ಲಸಿಕೆ ಕೊಡಿಸಿದ್ದೀರಿ ?

ಬೆಂಗಳೂರು: ನೀವು ಎಷ್ಟು ಜನರಿಗೆ ಲಸಿಕೆ ಕೊಡಿಸಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯ ಬಿಜೆಪಿ ಪ್ರಶ್ನಿಸಿದೆ.ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಬಾಯಿಬಿಟ್ಟರೆ ಬೊಗಳೆ ಬಿಡುವ ಸಿದ್ದರಾಮಯ್ಯನವರೇ, ಬಾದಾಮಿಯಲ್ಲಿ ಎಷ್ಟು ಜನ ಸೋಂಕಿಗೆ ಒಳಗಾಗಿದ್ದಾರೆ ಎನ್ನುವ ಮಾಹಿತಿಯಿದೆಯೇ? ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಇರುವ ಆಸ್ಪತ್ರೆ ಎಷ್ಟಿದೆ? ಎಷ್ಟು ಜನರಿಗೆ ಲಸಿಕೆ ಕೊಡಿಸಿದ್ದೀರಿ? ಶಾಸಕರಾಗಿ ಇದು ನಿಮ್ಮ ಜವಾಬ್ದಾರಿ ಎಂಬುದನ್ನು ಮರೆತಿದ್ದೀರಾ?’ ಎಂದು ಕೇಳಿದೆ. ಅಧಿಕಾರದಲ್ಲಿದ್ದಾಗ ಬಿಟ್ಟಿ ಭಾಗ್ಯಗಳ ಮೂಲಕ ರಾಜ್ಯದಲ್ಲಿ ಅಸ್ಥಿರತೆ ಮೂಡಿಸಿ, ಈಗ ನಾನು ಅಧಿಕಾರದಲ್ಲಿದ್ದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದಿದ್ದರೆ ಎಂಬ ‘ರೆ’ ರಾಗ ಎಳೆಯುತ್ತಿದ್ದೀರಿ ಎಂದು ಸಿದ್ದರಾಮಯ್ಯನವರನ್ನು ಟ್ವೀಟ್ ಮೂಲಕ ಬಿಜೆಪಿ ಟೀಕಿಸಿದೆ.

NEWS DESK

TIMES OF BENGALURU