ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ತಾಂಡವಾಡುತ್ತಿದ್ದು, ಬೆಡ್., ಆಕ್ಸಿಜನ್ ಗಾಗಿ ರೋಗಿಗಳು ಪರದಾಡುತ್ತಿದ್ದಾರೆ. ಇದರ ನಡುವೆ ಸೋಂಕಿತರಿಗೆ ವರದಾನವಾಗಿ ಬೆಂಗಳೂರಿಗೆ ಆಕ್ಸಿಜನ್ ಬಸ್ ಬಂದಿಳಿದಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅದೆಷ್ಟೋ ಮಂದಿ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೇ ಉಸಿರು ಚೆಲ್ಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಆಕ್ಸಿಜನ್ ಸಮಸ್ಯೆಗಾಗಿ ಸರ್ಕಾರ ಆಕ್ಸಿಜನ್ ಬಸ್ ಸೇವೆಗೆ ಚಾಲನೆ ನೀಡಿದೆ. ಅಂತೆಯೇ ಇಂದು ಬಸವನಗುಡಿಯಿಂದ ಬಂದಿರುವ ಕೊರೊನಾ ಸೋಂಕಿತ ವೃದ್ದೆಯೊಬ್ಬರು ಆಕ್ಸಿಜನ್ ಬಸ್ ನಲ್ಲಿ ಚಿಕಿತ್ಸೆ ಪಡೆದುಕೊಂಡರು.
NEWS DESK
TIMES OF BENGALURU